ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಕೋಡಿಕನ್ಯಾಣ

  • ಪಡುವಣ ಕಡಲ ತೀರದಲ್ಲಿರುವ ಸುಂದರ ಊರಾದ ಕೋಡಿ ಕನ್ಯಾಣದಲ್ಲಿ ದಿನಾಂಕ 18-06-2014 ರಂದು ಉದ್ಘಾಟನೆಗೊಂಡ ನಮ್ಮ ಸಹಕಾರಿ ಸಂಸ್ಥೆಯೇ ಶ್ರೀ ರಾಮಾಂಜನೇಯ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ . ಜನದಟ್ಟನೆ ಇರುವ ಹಾಗೂ ಬಹುತೇಕ ಮೀನುಗಾರರೇ ವಾಸಿಸುವ ಕೋಡಿ ಕನ್ಯಾಣಕ್ಕೆ ಆಧುನಿಕ ಬ್ಯಾಂಕಿಂಗ್ ವ್ಯವಹಾರ ಇರುವ ಸಹಕಾರಿ ಸಂಸ್ಥೆಯ ಅವಶ್ಯಕತೆ ಇದ್ದು ಅದರ ಫಲಶೃತಿಯಾಗಿ ಊರಿನ ಉತ್ಸಾಹಿ ತರುಣರ ತಂಡದಿಂದ ಸಹಕಾರಿ ಕಾಯ್ದೆಯಲ್ಲಿ ನೊಂದಾವಣೆಯಾಗಿರುವ ಸಂಸ್ಥೆಯೇ ಶ್ರೀ ರಾಮಾಂಜನೇಯ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ.

    ಸಂಸ್ಥೆಯು ಮಹಿಳೆಯರ ಸಮಗ್ರ ಅಭಿವೃದ್ಧಿಗೋಸ್ಕರ ಶ್ರೀ ರಾಮ ಸಹಾಯ ಗುಂಪು ಸಾಲ ಯೋಜನೆ ಎಂಬ ವಿನೂತನ ಕಲ್ಪನೆಯಲ್ಲಿ ಸುಮಾರು ಗುಂಪುಗಳಿಗೆ ಸಾಲ ನೀಡಿದ್ದು, ಸಾಲದ ಮರುಪಾವತಿಯು ಕರಾರುವಕ್ಕಾಗಿರುವುದು ಎಂದು ಹೇಳಲು ಇಚ್ಚಿಸುತ್ತೇವೆ. ಸಂಸ್ಥೆಯಲ್ಲಿ ಪ್ರಸಕ್ತ ಉಳಿತಾಯ ಖಾತೆ, ನಿಖರು ಠೇವಣಿ, ನಿತ್ಯನಿಧಿ ಠೇವಣಿ, ಶ್ರೀ ರಾಮ ನಗದು ಪತ್ರ ಹಾಗೂ ಚಿನ್ನಾಭರಣ ಸಾಲ, ಜಾಮೀನು ಸಾಲ, ಆಸ್ತಿ ಅಡಾಮಾನ ಸಾಲ, ಠೇವಣಿ ಆಧಾರಿತ ಸಾಲ, ತುತರ್ು ಸಾಲ, ದೀರ್ಘಾವಧಿ ಸಾಲಗಳನ್ನು ಸದಸ್ಯರಿಗೆ ನೀಡುತ್ತಿದೆ. ಎಲ್ಲಾ ಸದಸ್ಯರು ಸಂಸ್ಥೆಯಲ್ಲಿ ಎಲ್ಲಾ ರೀತಿಯ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ವಿನಂತಿಸುತ್ತಿದೆ.

ಸಹಕಾರಿ ತತ್ವಗಳು