ಸಹಕಾರಿಯು ಕೇವಲ ಸಾಮಾನ್ಯ ಬೇಂಕಿಂಗ್ ವ್ಯವಹಾರಕ್ಕೆ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸದೆ ಜನಸಾಮಾನ್ಯರಿಗೆ ಮುಟ್ಟುವಂತಹ ವಿವಿಧ ಸೇವಾ ಕಾರ್ಯಗಳು ಒಂದೇ ಸೂರಿನಡಿ ದೊರಕಲೆನ್ನುವ ನಿಟ್ಟಿನಲ್ಲಿ ಈ ಕೆಳಗಿನ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದೆ. ಸಹಕಾರಿಯ ಯೋಜನೆಗಳಿಗೆ ಗ್ರಾಹಕರ ಸ್ಪಂದನ ಬಹಳಷ್ಟು ಮೆಚ್ಚುಗೆ ಪಡುವಂತಹದ್ದಾಗಿದೆ.

  1.   ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‍ಪರ್
  2. ಪಾನ್ ಕಾರ್ಡ್ ಸೌಲಭ್ಯ
  3.   RTGS ಮತ್ತು NEFTಸೇವೆ
  4.   ಯೋಜನಾ ವರದಿ ತಯಾರಿ (Project Report)
  5.   ಆದಾಯ ತೆರಿಗೆ ಮೌಲ್ಯಮಾಪನ
  6. PASSPORT
  7. ವಿದೇಶಿ ಹಣ ವಿನಿಮಯ
  8. ಯಶಸ್ವಿನಿ

ಸಹಕಾರಿಯು ಕಾರ್ಯಾರಂಭಿಸಿ ಇದೀಗ ಎರಡು ವರ್ಷಗಳನ್ನು ಪೂರೈಸಲಿದ್ದು ಸಾಕಷ್ಟು ಜನಮನ್ನಣೆಗಳಿಸಿದ್ದು ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದು ಪೂರ್ಣ ಪ್ರಮಾಣದ ಶಾಖೆಯನ್ನು ತೆರೆದು ಗ್ರಾಹಕರ ಸೇವೆಗೆ ಅರ್ಪಿಸುವ ಯೋಜನೆ ಆಡಳಿತ ಮಂಡಳಿ ಹೊಂದಿದೆ.
ಪ್ರಸಕ್ತ ಸಾಲಿನಲ್ಲಿ ಇನ್ನೂ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವರೆ ಯೋಚಿಸಿದೆ. ಸದಸ್ಯರು ಹಾಗೂ ಗ್ರಾಹಕರು ನಮ್ಮ ವಿವಿಧ ಯೋಜನೆಗಳ ಪೂರ್ಣ ಪ್ರಯೋಜನ ಪಡಕೊಳ್ಳಬೇಕಾಗಿ ಕೋರಲಾಗಿದೆ.

2016-17ನೇ ಸಾಲಿನಲ್ಲಿ ಕಾರ್ಯರೂಪಕ್ಕೆ ತರಲುದ್ಧೇಶಿಸಿದ
ಕಾರ್ಯಯೋಜನೆಗಳು

  1. ಸಹಕಾರಿಯ ಕಾರ್ಯಕ್ಷೇತ್ರದಲ್ಲಿ ಒಂದು ಪೂರ್ಣ ಪ್ರಮಾಣದ ಶಾಖೆಯನ್ನು ತೆರೆಯುವುದು.
  2. ದೈನಿಕ ಉಳಿತಾಯ ಠೇವಣಿ ಖಾತೆಯ ಎಲ್ಲಾ ಠೇವಣಿ ಸಂಗ್ರಾಹಕರಿಗೆ ಯಂತ್ರಗಳ ಅಳವಡಿಕೆ.
  3. ಸಂಸ್ಥೆಂiÀಬ್ನಿಯೋಜಿತ ಶಾಖೆಯಲ್ಲಿ ಸ್ವಂತ ವೆಬ್ ಸೈಟ್ ಚಾಲನೆ.
  4. ನಿಯೋಜಿತ ಶಾಖೆಯಲ್ಲಿ ವೆಸ್ಟರ್ನ್ ಯೂನಿಯನ ಮನಿ ಟ್ರಾನ್ಸ್‍ಫರ್ ಮತ್ತು ಇ-ಸ್ಟಾಂಪಿಂಗ್ ಸೇವೆಯನ್ನು ಅಳವಡಿಸಿಕೊಳ್ಳುವುದು.