ದಿನಾ0ಕ 18-06-2014 ರ ಪೂರ್ವಾಹ್ನ ಸಮಯ 9.30 ಕ್ಕೆ ಶ್ರೀರಾಮಚ0ದ್ರ ದೇವರ ಪೂಣಾನುಗ್ರಹವನ್ನು ಪಡೆದುಕೊ0ಡು ಕರ್ನಾಟಕ ರಾಜ್ಯ ಸೌಹಾರ್ದ ಸ0ಯುಕ್ತ ಸಹಕಾರಿಯ ಅಧ್ಯಕ್ಷರಾದ ಮಾನ್ಯ ಶ್ರೀ ಎಸ್.ಆರ್ ಸತೀಶ್ಚ0ದ್ರರವರ ಸಮ್ಮುಖದಲ್ಲಿ ಕು0ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅಮೃತ ಹಸ್ತದಿ0ದ ನಮ್ಮ ಸಹಕಾರಿಯು ಉದ್ಘಾಟನೆಗೊ0ಡಿತು. ಸಹಕಾರಿಯ ಗಣಕ ಯ0ತ್ರ ಉದ್ಘಾಟನೆಯನ್ನು ಸಹಕಾರಿಯ ಕಾಯ್ದೆ ಸಲಹೆಗಾರರಾದ ಶ್ರೀ ಮ0ಜುನಾಥ್ ಎಸ್.ಕೆ ಯವರು, ಭದ್ರತಾಕೋಶದ ಉದಾಟನೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸ0ಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಭಾಸ್ಕರ ಕಾಮತ್ ರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ದಾನಿಗಳಾದ ಶ್ರೀ ಮಾಧವ ಉಪಾಧ್ಯಾ, ಜನತಾ ಫಿಶ್ಮಿಲ್ ಮಾಲಿಕರಾದ ಪ್ರಶಾ0ತ್ ಎ ಕು0ದರ್, ಗ್ರಾಮ ಪ0ಚಾಯತ್ ಅಧ್ಯಕ್ಷರಾದ ಶ್ರೀಮತಿ ಜಲಜ ಪೂಜಾರ್ತಿ ಹಾಗೂ ನಮ್ಮ ಸಹಕಾರಿಯ ಎಲ್ಲಾ ನಿರ್ದೇಶಕ ವರ್ಗದವರೂ ಮತ್ತು ಊರ ಹಾಗೂ ಪರ ಊರ ಗ್ರಾಮಸ್ಥರು ಸಾಕ್ಷಿಯಾದರು. ನ0ತರ ಶ್ರೀರಾಮ ದೇಗುಲದ ವಠಾರದಲ್ಲಿ ಉದ್ಘಾಟನಾ ಸಮಾರ0ಭದ ಸಭಾ ಕಾರ್ಯಕ್ರಮ ವಿಜೃ0ಭಣೆಯಿ0ದ ಜರುಗಿತು. ಆಗಮಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದವನ್ನು ಸಮರ್ಪಿಸಿದರು.