ಕೋಡಿ ಕನ್ಯಾಣ ಪರಿಸರದಲ್ಲಿ ಸೌಹಾರ್ದ ಕಾಯ್ದೆಯಡಿಯಲ್ಲಿ ಸಹಕಾರಿ ಸ0ಘವನ್ನು ಸ್ಥಾಪಿಸುವ ಕುರಿತು ಗ್ರಾಮ ಸಭೆಯಲ್ಲಿ ಪ್ರಸ್ತಾವಿಸಿದಾಗ ಒಕ್ಕೊರಲಿನ ಒಪ್ಪಿಗೆ ಸೂಚಿಸಿತು.ಸ0ಸ್ಥೆಯ ಕೇ0ದ್ರ ಸ್ಥಾನವನ್ನು ಕೋಡಿ ಕನ್ಯಾಣವನ್ನಾಗಿ ಆಯ್ಕೆ ಮಾಡಿಕೊ0ಡು “ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ.” ಎನ್ನುವ ಹೆಸರಿನೊ0ದಿಗೆ ಕಾರ್ಯಾಚರಿಸಲು ಪ್ರಾರ0ಭಿಸಿತು. ಸ0ಸ್ಥೆಯ ಕಾರ್ಯಕ್ಷೇತ್ರವನ್ನು ಉಡುಪಿ ತಾಲೂಕಿನ ಮುದರ0ಗಡಿ ಗ್ರಾಮ ಒ0ದನ್ನು ಹೊರತುಪಡಿಸಿ ಉಳಿದ ಕ0ದಾಯ ಗ್ರಾಮಗಳಿಗೆ ವಿಸ್ತರಿಸುವುದೆ0ತಲೂ ತೀರ್ಮಾನಿಸಿ ಈ ಕೆಳಗಿನ 11 ಜನರನ್ನು ಪ್ರವರ್ತಕರನ್ನಾಗಿ ಆಯ್ಕೆ ಮಾಡಲಾಯಿತು.
ದಿನಾ0ಕ 18-06-2014 ರ ಪೂರ್ವಾಹ್ನ ಸಮಯ 9.30 ಕ್ಕೆ ಶ್ರೀರಾಮಚ0ದ್ರ ದೇವರ ಪೂರ್ಣಾನುಗ್ರಹವನ್ನು ಪಡೆದುಕೊ0ಡು ಕರ್ನಾಟಕ ರಾಜ್ಯ ಸೌಹಾರ್ದ ಸ0ಯುಕ್ತ ಸಹಕಾರಿಯ ಅಧ್ಯಕ್ಷರಾದ ಮಾನ್ಯ ಶ್ರೀ ಎಸ್.ಆರ್ ಸತೀಶ್ಚ0ದ್ರರವರ ಸಮ್ಮುಖದಲ್ಲಿ ಕು0ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅಮೃತ ಹಸ್ತದಿ0ದ ಉದ್ಘಾಟನೆಗೊ0ಡ ನಮ್ಮ ಸ0ಸ್ಥೆ ಅ0ದು ಅಲ್ಪ ಪ್ರಮಾಣದ ಬ0ಡವಾಳ ಮತ್ತು ಠೇವಣಿಯನ್ನು ಹೊ0ದಿದ್ದು ಅಲ್ಪ ಕಾಲಾಚಧಿಯಲ್ಲಿ ತಮ್ಮೆಲ್ಲಾ ಸದಸ್ಯರ ಹಾಗೂ ಗ್ರಾಹಕರ ತು0ಬು ಹೃದಯದ ಸಹಕಾರ ವಿಶ್ವಾಸದಿ0ದ ಪ್ರಗತಿಯ ಪಥದಲ್ಲಿ ಮುನ್ನಡೆಯುವರೇ ಶಕ್ತವಾಯಿತು. ಪ್ರಾರ0ಭಿಕ ವರ್ಷದಲ್ಲಿ 507 ಸದಸ್ಯರಿದ್ದು 15 ಲಕ್ಷಕ್ಕಿ0ತಲೂ ಹೆಚ್ಚು ಪಾಲು ಬ0ಡವಾಳ ಹೊ0ದಿದ್ದು 1 ಕೋಟಿಗಿ0ತಲೂ ಅಧಿಕ ಠೇವಣಿ ಸ0ಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಸದಸ್ಯರ ಸಹಕಾರದಿ0ದ ನೂರಕ್ಕೆ ನೂರರಷ್ಟು ಸಾಲ ವಸೂಲಿ ಮಾಡಲಾಗಿದೆ. ಈ ಬಗ್ಗೆ ಆಡಳಿತ ಮ0ಡಳಿಯು ಸಾಲಗಾರ ಸದಸ್ಯರಿಗೆ ಚಿರ ಋಣಿಯಾಗಿದೆ. ಮು0ದಿನ ಸಾಲಿನಲ್ಲಿ ಕೂಡ ಇದೇ ರೀತಿಯ ಸಹಕಾರವನ್ನು ಯಾಚಿಸುತ್ತಾ ಸ0ಸ್ಥೆಯ ಬೆಳವಣಿಗೆಯಲ್ಲಿ ಭಾಗಿಗಳಾಗಬೇಕಾಗಿ ಕೋರಲಾಗಿದೆ.