ದೂರವಾಣಿ :08202564650

ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಆಡಳಿತ ಕಛೇರಿ, ಸೌಭಾಗ್ಯಧಾಮ ವಾಣಿಜ್ಯ ಸ0ಕೀರ್ಣ,ಕೋಡಿ ಕನ್ಯಾಣ-576226 ಎಲ್ ನ0 3569/14-15,ಉಡುಪಿ ಜಿಲ್ಲೆ

5ನೇ ವಾರ್ಷಿಕ ವರದಿ

ಸನ್ಮಾನ್ಯ ಸದಸ್ಯರೇ,

ಕರಾವಳಿಯ ತೀರದಲ್ಲಿ ನಮ್ಮ ಸಂಸ್ಥೆಯು ತನ್ನೆಲ್ಲ್ಲಾ ಸದಸ್ಯರಿಗೆ ಮತ್ತು ಗ್ರಾಹಕರಿಗೆ ನಾಲ್ಕು ವರ್ಷಗಳ ಸಾರ್ಥಕ ಸೇವೆ ನೀಡಿ ಎಲ್ಲಾ ಸದಸ್ಯರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹಾಗೆ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿ ಕಂಡಿರುವುದು ಅತ್ಯಂತ ಸಂತೋಷಕರವಾದ ವಿಚಾರ. ಇಂದಿನ ದಿನಗಳಲ್ಲಿ ಜನರ ಅವಶ್ಯಕತೆಗೆ ಅನುಗುಣವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಜನಸೇವೆಯಲ್ಲಿ ಮುಂದುವರೆಯುವ ಆಶಾವಾದವನ್ನು ನಮ್ಮ ಸಂಸ್ಥೆ ಹೊಂದಿರುತ್ತದೆ. ಆಧುನಿಕ ತಂತ್ರಜ್ಞಾನದೊಂದಿಗೆ ಪ್ರಾಮಾಣಿಕ ಸಿಬ್ಬಂದಿ ಸಂಯೋಜನೆಯೊಂದಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ಹಾಗೂ ಬ್ಯಾಂಕಿಂಗೇತರ ವ್ಯವಹಾರಗಳನ್ನು ನೀಡಲು ನಾವು ಕಟಿಬಧ್ಧರಾಗಿದ್ದೇವೆ. ಕೇವಲ ಅಲ್ಪಾವಧಿಯಲ್ಲಿ ಗಣನೀಯ ಪ್ರಗತಿ ಕಂಡ ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ತಮೆಲ್ಲರನ್ನು ಅಭಿನಂದಿಸುತ್ತಾ ಇನ್ನೂ ಹೆಚ್ಚಿನ ಸಹಕಾರವನ್ನು ಕೋರುತ್ತಾ 2017-18 ನೇ ಸಾಲಿನ ರ್ವಾಕ ಸಾಮಾನ್ಯ ಮಹಾಸಭೆಗೆ ತಮೆಲ್ಲರನ್ನು ಹಾರ್ಧಿಕವಾಗಿ ಸ್ವಾಗತಿಸುತ್ತಾ 31-03-2018 ರ ಅಂತ್ಯವಾಗುವ ಸಹಕಾರಿಯ ವರದಿಯನ್ನು ತಮ್ಮ ಮುಂದಿಡಲು ಆಡಳಿತ ಮಂಡಳಿಯು ಸಂತೋಷ ಪಡುತ್ತದೆ.

ಪ್ರಸಕ್ತ ಸಾಲಿನಲ್ಲಿ ಸುಮಾರು 326 ಲಕ್ಷ ರೂಪಾುಗಿಂತಲೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದ್ದು, ಸಹಕಾರಿ ಸದಸ್ಯರ ಅಗತ್ಯತೆಯನ್ನು ಪೂರೈಸುತ್ತಾ ಬಂದಿರುತ್ತದೆ. ಪಸ್ತುತ ಸಾಲಿನಲ್ಲಿ ಸದಸ್ಯರ ಅಪೇಕ್ಷೆಯಂತೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡಬೇಕೆಂಬ ಆಶಯದೊಂದಿಗೆ ಆಡಳಿತ ಮಂಡಳಿಯು ಕಾರ್ಯಪ್ರವೃತ್ತವಾಗಿದೆ. ಪ್ರಸಕ್ತ ಸಾಲಿನ ವರದಿಯಲ್ಲಿ ಸದಸ್ಯರಿಗೆ ಸಹಕಾರಿಯ ಚಟುವಟಿಕೆಗಳ ಪೂರ್ತಿ ಮಾಹಿತಿ ನೀಡಲಾಗಿದೆ. ತಾವು ಈ ವರದಿಯನ್ನು ಅಧ್ಯಯನ ಮಾಡಿ ಸಂಸ್ಥೆಯ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ.

ವಿವಿಧ ಸೇವಾ ಕಾರ್ಯಗಳು :-

-ಸಹಕಾರಿಯು ಕೇವಲ ಸಾಮಾನ್ಯ ಬ್ಯಾ0ಕಿ0ಗ್ ವ್ಯವಹಾರಕ್ಕೆ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸದೆ ಜನಸಾಮಾನ್ಯರಿಗೆ ಮುಟ್ಟುವ0ತಹ ವಿವಿಧ ಸೇವಾ ಕಾರ್ಯಗಳು ಒ0ದೇ ಸೂರಿನಡಿ ದೊರಕಲೆನ್ನುವ ನಿಟ್ಟಿನಲ್ಲಿ ಈ ಕೆಳಗಿನ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತ0ದಿದೆ. ಸಹಕಾರಿಯ ಯೋಜನೆಗಳಿಗೆ ಗ್ರಾಹಕರ ಸ್ಪ0ದನ ಬಹಳಷ್ಟು ಮೆಚ್ಚುಗೆ ಪಡುವ0ತಹದ್ದಾಗಿದೆ.

  1. ವೆಸ್ಟನ್ ಯೂನಿಯನ್ ಮನಿ ಟ್ರಾನ್ಸ್‍ಫರ್
  2. ಪಾನ್‍ಕಾರ್ಡ್ ಸೌಲಭ್ಯ
  3. ಖಖಿಉS  ಮತ್ತು ಓಇಈಖಿ   ಸೇವೆ.
  4. ಯೋಜನಾ ವರದಿ ತಯಾರಿ
  5. ಆದಾಯ ತೆರಿಗೆ ಮೌಲ್ಯಮಾಪನ
  6. ಯಶಸ್ವಿನಿ ಕಾರ್ಡು ವಿತರಣೆ
  7. ಪಹಣೆ ಪತ್ರ (ಖಖಿಅ) ತೆಗೆದುಕೊಡಲಾಗುವುದು.
  8. ಎಲ್.ಐ.ಸಿ ಪ್ರೀಮಿಯಮ್ ಮತ್ತು ದೂರವಾಣಿ ಬಿಲ್ಲು ಪಾವತಿ.
  9. ವಿದ್ಯುತ್ ಬಿಲ್ಲುಗಳನ್ನು ಶುಲ್ಕವಿಲ್ಲದೇ ಕಟ್ಟಿಸಿಕೊಡಲಾಗುವುದು.

ಸಹಕಾರಿಯು ಕಾರ್ಯಾರ0ಭಿಸಿ ಇದೀಗ ನಾಲ್ಕು ವರ್ಷಗಳನ್ನು ಪೂರೈಸಿದ್ದು ಸಾಕಷ್ಟು ಜನಮನ್ನಣೆಗಳಿಸಿದ್ದು ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಹಿ0ದಿನ ಆಡಳಿತ ಸಭೆಯ ನಿರ್ಣಯದ0ತೆ ಪ್ರಸಕ್ತ ಸಾಲಿನಲ್ಲಿ ಎರಡು ಪೂರ್ಣ ಪ್ರಮಾಣದ ಶಾಖೆಯನ್ನು ತೆರೆದು ಗ್ರಾಹಕರ ಸೇವೆಗೆ ಅರ್ಪಿಸುವ ಯೋಜನೆಯಲ್ಲಿ ಆಡಳಿತ ಮ0ಡಳಿ ಕಾರ್ಯಪ್ರವೃತ್ತವಾಗಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವರೇ ಯೋಚಿಸಿದೆ. ಸದಸ್ಯರು ಹಾಗೂ ಗ್ರಾಹಕರು ನಮ್ಮ ವಿವಿಧ ಯೋಜನೆಗಳ ಪೂರ್ಣ ಪ್ರಯೋಜನ ಪಡಕೊಳ್ಳಬೇಕಾಗಿ ಕೋರಲಾಗಿದೆ.

ಸಹಕಾರಿಯ ವ್ಯವಹಾರ ಚಟುವಟಿಕೆಗಳಲ್ಲಿ ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದ ಕರ್ನಾಟಕ ರಾಜ್ಯ ಸೌಹಾರ್ದ ಸ0ಯುಕ್ತ ಸಹಕಾರಿ ನಿ. ಬೆ0ಗಳೂರು, ಸಹಕಾರಿ ಇಲಾಖೆ, ಬೇ0ಕರರುಗಳಾದ ದ.ಕ.ಜಿಲ್ಲಾ ಕೇ0ದ್ರ ಸಹಕಾರಿ ಬೇ0ಕಿನ ಸಾಲಿಗ್ರಾಮ ಶಾಖೆ, ಐ.ಡಿ.ಬಿ.ಐ ಬೇ0ಕಿನ ಕು0ದಾಪುರ ಶಾಖೆ, ಎಕ್ಸಿಸ್ ಬೇ0ಕಿನ ಕು0ದಾಪುರ ಶಾಖೆ, ಉಡುಪಿ ಕೋ-ಆಪ್ ಟೌನ್ ಬ್ಯಾ0ಕ್ ಸಾಲಿಗ್ರಾಮ ಶಾಖೆ, ಕೋಟ ಸಿ.ಎ ಬ್ಯಾ0ಕ್ ಕೋಡಿ ಶಾಖೆ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ. ಉಡುಪಿ, ಮೂರ್ತೆದಾರರ ಸೇವಾ ಸಹಕಾರಿ ಸ0ಘ ನಿ. ಕೋಟ, ಮೂರ್ತೆದಾರರ ಮಹಾ ಮ0ಡಲ ನಿ. ಬ್ರಹ್ಮಾವರ, ಶ್ರೀ ವೇಣುಗೋಪಾಲಕೃಷ್ಣ ಸೌಹಾರ್ದ ಸಹಕಾರಿ ನಿ. ಬಾರ್ಕೂರು, ಕಾಮಧೇನು ಸಹಕಾರಿ ಸ0ಘ ಹ0ದಟ್ಟು, ಶ್ರೀ ವಿಶ್ವವಿನಾಯಕ ಸಹಕಾರಿ ಸ0ಘ ನಿ. ಕೋಟ, ಛತ್ರಪತಿ ಶಿವಾಜಿ ಸಹಕಾರಿ ಸ0ಘ ನಿ. ಉಡುಪಿ, ಉಡುಪಿ ನ್ಯಾಯವಾದಿಗಳ ಸಹಕಾರಿ ಸ0ಘ ನಿ ಉಡುಪಿ, ಮಣಿಪುರ ಮೀನುಗಾರರ ಸಹಕಾರಿ ಸ0ಘ ನಿ. ಮಣಿಪುರ, ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ ಉಡುಪಿ, ಅಗ್ರಜ ಸೌಹಾರ್ದ ಸಹಕಾರಿ ನಿ ಉಡುಪಿ, ಮಲ್ಪೆ ಮೀನು ವ್ಯಾವಾರಸ್ಥ ಮೀನುಗಾರರ ಸೌಹಾರ್ದ ಸಹಕಾರಿ ನಿ., ಅನ0ತ ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ನಿ. ಪಾ0ಡೇಶ್ವರ ಇವರೆಲ್ಲರ ಸಹಕಾರಕ್ಕೆ ಆಡಳಿತ ಮ0ಡಳಿ ಕೃತಜ್ನತೆ ಸಲ್ಲಿಸಬಯಸುತ್ತದೆ

.ಕ್ಲಪ್ತ ಸಮಯದಲ್ಲಿ ಸಹಕಾರಿಯ ಲೆಕ್ಕ ತಪಾಸಣೆ ನಡೆಸಿ ಲೆಕ್ಕಪತ್ರಗಳನ್ನಿತ್ತು ಸಹಕರಿಸಿದ ಕಾಯ್ದೆಬದ್ದ ಲೆಕ್ಕತಪಾಸಣಾಧಿಕಾರಿಗಳಾದ ಶ್ರೀ.ಸಿ.ಎ ಗಿರೀಶ್ ಪೈ ಸನ್ನದು ಲೆಕ್ಕಪರಿಶೋಧಕರು ಬ್ರಹ್ಮಾವರ ಇವರಿಗೂ, ಸ0ಘಕ್ಕೆ ತಮ್ಮನ್ನು ತೊಡಗಿಸಿಕೊ0ಡು ಸ0ಘದ ಪ್ರಗತಿಗೆ ಕಾರಣೀಕರ್ತರಾದ ನಿಷ್ಟಾವ0ತ ಸಿಬ್ಬ0ದಿ ವರ್ಗ ಮತ್ತು ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದ ಸಹಕಾರಿಯ ಕಾಯ್ದೆ ಸಲಹೆಗಾರರಾದ ಶ್ರೀ ಮ0ಜುನಾಥ ಎಸ್.ಕೆ ನ್ಯಾಯವಾದಿ ಉಡುಪಿ, ಠೇವಣಾತಿಗಳನ್ನಿತ್ತು ಸಹಕರಿಸಿದ ಠೇವಣಾತಿದಾರರು, ಕ್ಲಪ್ತ ಸಮಯದಲ್ಲಿ ಸಾಲಗಳನ್ನು ಮರುಪಾವತಿ ಮಾಡಿದ ಸಾಲಗಾರರು, ಗ್ರಾಹಕರು, ಸದಸ್ಯರು ಮತ್ತು ಎಲ್ಲಾ ಸಹಕಾರಿ ಬ0ಧುಗಳಿಗೂ ಸ0ಘದ ಆಡಳಿತ ಮ0ಡಳಿಯು ತು0ಬು ಹೃದಯದ ಕೃತಜ್ನತೆಯನ್ನು ಸಲ್ಲಿಸುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಹಕಾರಿ ಬ0ಧುಗಳಿಗೆ ಮತ್ತೊಮ್ಮೆ ಆಡಳಿತ ಮ0ಡಳಿ ಆಭಾರಿಯಾಗಿರುತ್ತದೆ.

PHOTOS 2018-2019 GENARAL BODY MEETING

2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ ಡಿವಿಡೆ0ಡ್ ವಿತರಣೆ

2017-18 ನೇ ಸಾಲಿನ ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ

2017-18 ನೇ ಸಾಲಿನ ವಾರ್ಷಿಕ ಮಹಾಸಭೆಗೆ ಆಗಮಿಸಿದ ಅನ್ಯ ಸಹಕಾರಿ ಸ0ಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರುಗಳು

2017-18 ನೇ ಸಾಲಿನ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರು

2017-18 ನೇ ಸಾಲಿನ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರಿಗೆ ಗಿಫ್ಟ್ ವಿತರಣೆ

2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ವನಮಹೋತ್ಸವ ಆಚರಣೆ

ಸ್ಥಳೀಯ ಪ್ರಾಥಮಿಕ ಶಾಲೆಯ ಅಭಿವೃಧ್ದಿ ಸಮಿತಿಗೆ ಕೊಡುಗೆ ನೀಡಿದ ವಾಟರ್ ಕೂಲರ್‍ನ ಚೆಕ್ ಹಸ್ತಾ0ತರ

ನಮ್ಮ ಸಹಕಾರಿಯಿ0ದ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ವಾಟರ್ ಕೂಲರ್ ನ ಉದ್ಘಾಟನೆ ಅಧ್ಯಕ್ಷರಾದ ಶ್ರೀ ಶ0ಭುಶ0ಕರ್ ರವರಿ0ದ
 

“ಗ್ರಾಮೀಣಾಭಿವೃದ್ದಿಗೆ ಸಹಕಾರಿಯೇ ಹೆಬ್ಬಾಗಿಲು”