ಶ್ರೀ ರಾಮಾ0ಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ.ನಿ ಕೋಡಿ-ಕನ್ಯಾಣ ಆಡಳಿತ ಕಛೇರಿ, “ಸೌಭಾಗ್ಯಧಾಮ ವಾಣಿಜ್ಯ ಸ0ಕೀರ್ಣ”-ಕೋಡಿ ಕನ್ಯಾಣ 57622
ಏಳನೇ ವಾರ್ಷಿಕ ವರದಿ
ಸನ್ಮಾನ್ಯ ಸದಸ್ಯರೇ,
ಕರಾವಳಿಯ ತೀರದಲ್ಲಿ ನಮ್ಮ ಸಂಸ್ಥೆಯು ತನ್ನೆಲ್ಲ್ಲಾ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಆರು ವರ್ಷಗಳ ಸಾರ್ಥಕ ಸೇವೆ ನೀಡಿ ಎಲ್ಲಾ ಸದಸ್ಯರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹಾಗೆ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿ ಕಂಡಿರುವುದು ಅತ್ಯಂತ ಸಂತೋಷಕರವಾದ ವಿಚಾರ. ಇಂದಿನ ದಿನಗಳಲ್ಲಿ ಜನರ ಅವಶ್ಯಕತೆಗೆ ಅನುಗುಣವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಜನಸೇವೆಯಲ್ಲಿ ಮುಂದುವರೆಯುವ ಆಶಾವಾದವನ್ನು ನಮ್ಮ ಸಂಸ್ಥೆ ಹೊಂದಿರುತ್ತದೆ. ಆಧುನಿಕ ತಂತ್ರಜ್ಞಾನದೊಂದಿಗೆ ಪ್ರಾಮಾಣಿಕ ಸಿಬ್ಬಂದಿ ಸಂಯೋಜನೆಯೊಂದಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ಹಾಗೂ ಬ್ಯಾಂಕಿಂಗೇತರ ವ್ಯವಹಾರಗಳನ್ನು ನೀಡಲು ನಾವು ಕಟಿಬಧ್ಧರಾಗಿದ್ದೇವೆ. ಕೇವಲ ಅಲ್ಪಾವಧಿಯಲ್ಲಿ ಗಣನೀಯ ಪ್ರಗತಿ ಕಂಡ ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ತಮೆಲ್ಲರನ್ನು ಅಭಿನಂದಿಸುತ್ತಾ ಇನ್ನೂ ಹೆಚ್ಚಿನ ಸಹಕಾರವನ್ನು ಕೋರುತ್ತಾ 2019-20 ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ತಮೆಲ್ಲರನ್ನು ಹಾರ್ಧಿಕವಾಗಿ ಸ್ವಾಗತಿಸುತ್ತಾ 31-03-2020 ಕ್ಕೆ ಅಂತ್ಯವಾಗುವ ಸಹಕಾರಿಯ ವರದಿಯನ್ನು ತಮ್ಮ ಮುಂದಿಡಲು ಆಡಳಿತ ಮಂಡಳಿಯು ಸಂತೋಷಪಡುತ್ತದೆ.
ಪ್ರಸಕ್ತ ಸಾಲಿನಲ್ಲಿ ಸುಮಾರು 8.3ಕೋಟಿ ರೂಪಾಯಿಗಿಂತಲೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದ್ದು, ಸಹಕಾರಿ ಸದಸ್ಯರ ಅಗತ್ಯತೆಯನ್ನು ಪೂರೈಸುತ್ತಾ ಬಂದಿರುತ್ತದೆ. ಪಸ್ತುತ ಸಾಲಿನಲ್ಲಿ ಸದಸ್ಯರ ಅಪೇಕ್ಷೆಯಂತೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡಬೇಕೆಂಬ ಆಶಯದೊಂದಿಗೆ ಆಡಳಿತ ಮಂಡಳಿಯು ಕಾರ್ಯಪ್ರವೃತ್ತವಾಗಿದೆ. ಪ್ರಸಕ್ತ ಸಾಲಿನ ವರದಿಯಲ್ಲಿ ಸದಸ್ಯರಿಗೆ ಸಹಕಾರಿಯ ಚಟುವಟಿಕೆಗಳ ಪೂರ್ತಿ ಮಾಹಿತಿ ನೀಡಲಾಗಿದೆ. ತಾವು ಈ ವರದಿಯನ್ನು ಅಧ್ಯಯನ ಮಾಡಿ ಸಂಸ್ಥೆಯ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ
PHOTOS 2019-2020 GENARAL BODY MEETING
2019-20 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರ ಭಾಷಣ
ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರಿಗೆ ಡಿವಿಡೆ0ಡ್ ವಿತರಣೆ
ಮಹಾಸಭೆಯಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ
2019-20 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಶ್ರೀ ಮ0ಜುನಾಥ ಎಸ್.ಕೆ
2019-20 ನೇ ಸಾಲಿನ ವಾರ್ಷಿಕ ಮಹಾಸಭೆ