ಶ್ರೀರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಕೋಡಿ ಕನ್ಯಾಣ ಇದರ ದಶಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ಹಿತೈಷಿಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ “ತಥಾಸ್ತು” ಬಡವರಿಗೊಂದು ಸೂರು ಯೋಜನೆಯ ಉದ್ಘಾಟನಾ ಸಮಾರಂಭ ದಿನಾಂಕ 24.02.2024 ರ ಶನಿವಾರ ಸಂಜೆ 6.00 ಗಂಟೆಗೆ ಸರಿಯಾಗಿ ಲಕ್ಷಿ ಸೋಮ ಬಂಗೇರ ಸ್ಮಾರಕ ಸರಕಾರಿ ಫ್ರೌಢಶಾಲೆಯ ಆವರಣದಲ್ಲಿ ಸಾಕಾರಗೊಂಡಿತು. ಈ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀನಾಗೇಂದ್ರ ನಾವುಡ ಕೋಡಿ ನಿವೃತ್ತ ಅಂಚೆ ಇಲಾಖೆ ಅಧಿಕಾರಿಗಳು ಉದ್ಘಾಟಿಸಿ ಬಡವರಿಗೊಂದು ಸೂರು ಯೋಜನೆಯು ಹೆಮ್ಮೆಯ ಯೋಜನೆಯಾಗಿದ್ದು ಈ ಯೋಜನೆಯನ್ನು ಹಾಕಿಕೊಂಡ ಸೌಹಾರ್ದ ಸಹಕಾರಿಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಅಂಪಾರು ಜಗನ್ನಾಥ ಶೆಟ್ಟಿಯವರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಇದೊಂದು ಮಾದರಿ ಯೋಜನೆಯಾಗಿದು ್ದಉಡುಪಿ ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿ ಸಂಘದ ಪರವಾಗಿ ತುಂಬು ಹೃದಯದ ಕೃತಜ್ನತೆ ಸಲ್ಲಿಸಿ ಇನ್ನಿತರ ಸಂಸ್ಥೆಗಳಿಗೆ ಇದು ಮಾದರಿಯಾಗಲಿ ಎನ್ನುವ ಶುಭನುಡಿಗಳನ್ನಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಶಂಭು ಪೂಜಾರಿಯವರು ವಹಿಸಿದರು. ಕೋಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಶ್ರೀಮತಿ ಗೀತಾ ಗೋಪಾಲ ಖಾರ್ವಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಶ್ರೀ ರಾಘವೇಂದ್ರ ಕೆ, ಸರಕಾರಿ ಫ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ರಾಧಿಕಾ, ಶ್ರೀ ಅಶೋಕ್ ಬಿ ಕುಂದರ್ ಜೆ.ಎಸ್.ಆರ್ ಇಂಟರ್ ನ್ಯಾಷನಲ್ ಚೀನಾ ಇದರ ಪ್ರವರ್ತಕರು, ಶ್ರೀ ವಿಜಯ್ ಕೆ ನಾಯರಿ ದೈಹಿಕ ಶಿಕ್ಷಕರು,ಶ್ರೀ ವಿಜಯ ತಿಂಗಳಾಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಶ್ರೀ ಗೋಪಾಲ ಖಾರ್ವಿ ಗಿನ್ನೆಸ್ ವರ್ಲ್ಡ್ ರೆಕಾರ್ಡರ್, ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಮಹಾಬಲ ಕುಂದರ್ ಮತ್ತು ಸಂಸ್ಥೆಯ ನಿರ್ದೇಶಕರಾದ ಶ್ರೀ ರಾಘವೇಂದ್ರ ಸುವರ್ಣ, ಶ್ರೀ ದಯಾನಂದ ಕರ್ಕೇರ,ಶ್ರೀ ಲಕ್ಷö್ಮಣ ಖಾರ್ವಿ, ಶ್ರೀ ಉದಯ್ ಕಾಂಚನ್, ಶ್ರೀ ಜಯಕುಮಾರ್, ಶ್ರೀ ಲೋಹಿತ್ ಕುಂದರ್, ಶ್ರೀ ಭಾಸ್ಕರ್ ಕಾಂಚನ್, ರೊನಾಲ್ಡ್ ಡಿ ಸೋಜಾ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಆಗಮಿಸಿದ ಎಲ್ಲಾ ಅತಿಥಿಗಳಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರು ಧನ್ಯವಾದ ಸಮರ್ಪಿಸಿ ಸುಧೀರ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮವಾಗಿ ಶ್ರೀ ರಾಮಾಂಜನೇಯ ಟ್ರೋಪಿ 2024 ಕ್ರಿಕೇಟ್ ಪಂದ್ಯಾವಳಿ ನಡೆಯಿತು. ಈ ಪಂದ್ಯಾಟದ ವಿಜೇತರಾಗಿ ಅಯೋಧ್ಯಾ ಫ್ರೆಂಡ್ಸ್ ಪ್ರಥಮ 35000 ನಗದು ಮತ್ತು ಶಾಶ್ವತ ಫಲಕ ಮತ್ತು ದ್ವಿತೀಯ ಸ್ಥಾನಿಯಾಗಿ ಶ್ರೀರಾಮ್ ಫ್ರೆಂಡ್ಸ್ 25000 ನಗದು ಮತ್ತು ಶಾಶ್ವತ ಫಲಕ ಪಡೆದರು.
Search
Gallery





