“ತಥಾಸ್ತು”
ಬದುಕಿಗೊಂದು ಸೂರು ಯೋಜನೆ
ಮಾನವೀಯ ಕೈಂಕರ್ಯವಾಗಿ ಸಂಸ್ಥೆಯ ಬಡ ಗ್ರಾಹಕರಾದ ಶ್ರೀಮತಿ ಭವಾನಿ ಜಿ ನಾಯಕ್ ಕುಟುಂಬಕ್ಕೆ ಗೃಹ ನಿರ್ಮಾಣ, ಹಸ್ತಾಂತರ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಡಿ ಕನ್ಯಾಣ ಎಂಬ ಕರಾವಳಿ ತೀರದಲ್ಲಿರುವ ಪುಟ್ಟ ಗ್ರಾಮದಲ್ಲಿ ಜನಿಸಿದ ಶ್ರೀಮತಿ ಭವಾನಿ ಜಿ ನಾಯಕ್ರವರ ವಯಸ್ಸು ೮೫. ಸಾಂಸಾರಿಕವಾಗಿ ೨ ಗಂಡು ಮತ್ತು ೨ ಹೆಣ್ಣು ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿರುವ ತನ್ನ ಬದುಕಿನ ಪ್ರಮುಖ ಘಟ್ಟದಲ್ಲಿ ಜೀವನಕ್ಕೆ ಆಸರೆಯಾಗಿರುವ ತನ್ನ ಪತಿಯನ್ನು ಕಳೆದುಕೊಂಡು ಶೋಚನೀಯ ಪರಿಸ್ಥಿತಿಯಲ್ಲಿದ್ದರೂ ತನ್ನ ಎರಡು ಗಂಡು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಇನ್ನೇನು ಬದುಕಿನಲ್ಲಿ ನಿಟ್ಟುಸಿರು ಬಿಡುವಾಗಲೇ ವಿಧಿಯ ಆಟಕ್ಕೆ ಎರಡೂ ಗಂಡು ಮಕ್ಕಳನ್ನು ಕಳೆದುಕೊಂಡು ಬದುಕು ದಯನೀಯ ಪರಿಸ್ಥಿತಿಗೆ ನೂಕಲ್ಪಟ್ಟಿತು. ಅಷ್ಟಲ್ಲದೆ ಮತ್ತೆರಡು ಸೊಸೆಯಂದಿರ ಬದುಕನ್ನು ಇವರೇ ನೋಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇವರ ಜೀವನದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಹಿರಿಯ ವಯಸ್ಸಿನಲ್ಲಿ ಮಕ್ಕಳ ಆಶ್ರಯವನ್ನು ಪಡೆಯಬೇಕಾದ ಅವರೇ ತನ್ನವರಿಗೆ ಆಶ್ರಯ ಕೊಡುವಂತಾಯಿತು. ಮನೆಯ ಮೇಲ್ಚಾವಣಿ ಸೋರುತ್ತಿದೆ, ದುಡಿಮೆಗೆ ದಿಕ್ಕಿಲ್ಲ. ಹೆಣ್ಣು ಮಕ್ಕಳು ವಾಸವಾಗಿರುವ ಮನೆ ಸುರಕ್ಷಿತವಾಗಿರಬೇಕೆಂಬ ನೆಲೆಯಲ್ಲಿ ಸಣ್ಣ ಗೃಹ ನಿರ್ಮಾಣ ಮಾಡಬೇಕೆಂಬ ಮಹದಾಸೆ ಹೊತ್ತಂತ ಭವಾನಿ ಜಿ ಕುಟುಂಬಕ್ಕೆ ಶ್ರೀರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮರಳುಗಾಡಿನಲ್ಲಿ ನೀರಿನ ಚಿಲುಮೆ ಸಿಕ್ಕಂತೆ ಸಂತೋಷವಾಯಿತು.
ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದಲೇ ಬದುಕು ಸಾಗಿಸುತ್ತಿರುವ ಇವರ ಕುಟುಂಬ ಭೀಕರ ಮಳೆ, ಗಾಳಿಗೆ ಸಿಲುಕಿ ಹಳೆಯ ಮನೆಯ ಮೇಲ್ಚಾವಣಿ ದುರಸ್ಥಿಗೊಂಡು ವಾಸಿಸಲು ಆಗದ ಪರಿಸ್ಥಿತಿಯಲ್ಲಿರುವಾಗ ಸ್ಥಳೀಯ ಕೋಡಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಭಿವೃಧ್ದಿ ಅಧಿಕಾರಿಗಳ ತಂಡ ದುರಸ್ಥಿಗೆ ಪರಿಶೀಲನೆಗೆ ಹೋದಾಗ ಅವರ ಭೂಮಿಗೆ ಯಾವುದೇ ದಾಖಲಾತಿ ಇಲ್ಲದಿರುವುದರಿಂದ ಯಾವುದೇ ಅನುದಾನದ ಬಿಡುಗಡೆ ಮಾಡಲಾಗದ ಪರಿಸ್ಥಿತಿಯಲ್ಲಿ ಪಂಚಾಯತ್ ಮತ್ತು ಭವಾನಿ ಜಿ ನಾಯಕ್ ಕುಟುಂಬ ನಮ್ಮ ಸಂಸ್ಥೆಯ ಆಡಳಿತ ಮಂಡಳಿಯನ್ನು ಸಹಕಾರಕ್ಕಾಗಿ ಸಂಪರ್ಕಿಸಿದಾಗ ಅವರ ವಿನಮ್ರ ಮನವಿಯ ಮೇರೆಗೆ ಸಾಮಾಜಿಕ ಸ್ಪಂದನಾ ಗುಣವುಳ್ಳ ನಮ್ಮ ಆಡಳಿತ ಸಮಿತಿಯು ಭವಾನಿ ಜಿ ನಾಯಕ್ ರ ಬದುಕಿಗೊಂದು ಸೂರು ಕಟ್ಟಿಸಿಕೊಡಬೇಕೆಂಬ ಮಾನವೀಯ ನೆಲೆಯಲ್ಲಿ ಗೃಹ ನಿರ್ಮಾಣದ ಕುರಿತು ಚರ್ಚಿಸಲಾಯಿತು.
ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತನ್ನ ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ಕಾರ್ಯವೈಖರಿಯಲ್ಲಿ ಈಗಾಗಲೇ ಜನಸ್ನೇಹಿ ಸಂಸ್ಥೆಯಾಗಿ ಬೆಳೆದು ಬಂದAತಹ ವಿಚಾರ ತಮಗೆಲ್ಲರಿಗೂ ಗೊತ್ತಿದೆ. ಜನಪರ ಕಾರ್ಯ ಚಟುವಟಿಕೆ, ಸಮಾಜಮುಖಿ ಕೈಂಕರ್ಯದಲ್ಲಿ ಗ್ರಾಹಕ ಬಂಧುವಾಗಿ ಜನತೆಯ ವೇದನೆ ಮತ್ತು ನಿವೇದನೆಗಳಿಗೆ ಕಿವಿಯಾಗುವ ಮತ್ತು ಕಣ್ಣಾಗುವ ಉತ್ತಮೋತ್ತಮವಾದ ಸ್ಪಂದನಾ ಗುಣವನ್ನು ಬೆಳೆಸಿಕೊಂಡು ಬಂದಿದೆ. ಸಂಸ್ಥೆಯು ದಶಮ ಸಂಭ್ರವನ್ನು ಆಚರಿಸುತ್ತಿರುವ ಈ ಸುಸಂಧರ್ಭದಲ್ಲಿ ಅದರ ಸವಿನೆನಪಿಗಾಗಿ “ತಥಾಸ್ತು ಯೋಜನೆ”ಯನ್ನು ಹುಟ್ಟು ಹಾಕಿ ಸಂಸ್ಥೆಯ ಪ್ರತಿ ಹತ್ತು ವರ್ಷಕ್ಕೊಮ್ಮೆ ತನ್ನದೇ ಬಡ ಗ್ರಾಹಕ ಸದಸ್ಯರಿಗೆ ಸೂರು ನಿರ್ಮಿಸಿ ಕೊಡುವ ಮಹತ್ವ ಪೂರ್ಣ ಸಂಕಲ್ಪಕ್ಕೆ ಮನಸ್ಸು ಮಾಡಿದೆ. ಈ ಸಂಕಲ್ಪಕ್ಕೆ ಎಲ್ಲಾ ಸಹೃದಯಿಗಳ ಹಾರ್ಧಿಕವಾದಂತಹ ತನು,ಮನ,ಧನದ ಸಹಕಾರಗೊಂಡರೆ ಮೂಲಭೂತ ಅಗತ್ಯವಾದಂತಹ ಸುಂದರ ಗೃಹವೊಂದು ಬಡವರಿಗೆ ನೆರಳಾಗಿ ನಿಲ್ಲುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಆಶಯವಿರಿಸಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಊರ ದಾನಿಗಳ ಮತ್ತು ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ಗೃಹ ನಿರ್ಮಾಣದ ನೀಲ ನಕ್ಷೆಯನ್ನು ತಯಾರು ಮಾಡಲಾಯಿತು.
ಸಮಕಾಲೀನ ಪರಿಸ್ಥಿತಿಯಲ್ಲಿ ಒಂದು ಗೃಹನಿರ್ಮಾಣ ಎಂಬುದು ಬಹು ವೆಚ್ಚ ತಗಲುವಂತದ್ದು. ಈ ದಿಸೆಯಲ್ಲಿ ಆರ್ಥಿಕ ಸಂಗ್ರಹಣೆ ಹೇಗೆ ಎಂಬAತೆ ಆಲೋಚಿಸಿ ಊರ ದಾನಿಗಳು, ಪೋಷಕರು ಹಾಗೂ ಎಲ್ಲಾ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರವನ್ನು ಬಯಸಿ ಪತ್ರ ರವಾನಿಸಿ ಧನ ಸಂಗ್ರಹಣೆಗೆ ಚಾಲ್ತಿ ನೀಡಲಾಯಿತು. ಈ ಯೋಜನೆ ಯಶಸ್ವಿಯಾಗಲು ಸಂಘ ಸಂಸ್ಥೆಗಳ ಆಸಕ್ತಿಯಂತೆ ಕ್ರಿಕೇಟ್ ಪಂದ್ಯಾಟ ಮತ್ತು ಲಕ್ಕಿಡಿಪ್ ಯೋಜನೆಯೊಂದಿಗೆ ಕಾರ್ಯಾರಂಭಿಸಲಾಯಿತು. ಈ ಕಾರ್ಯಕ್ರಮಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಧನ ಸಂಗ್ರಹಿಸಲು ನಮ್ಮೊಂದಿಗೆ ಸಂಘ ಸಂಸ್ಥೆಗಳು ನೆರವಾದರು. ಹಾಗೆಯೇ ದಾನಿಗಳು ಮತ್ತು ಪೋಷಕರ ಭೇಟಿಯಿಂದ ಒಂದಷ್ಟು ಸಂಗ್ರಹಣೆಯನ್ನು ಮಾಡಲಾಯಿತು. ಉಳಿದ ಮೊತ್ತವನ್ನು ನಮ್ಮ ಸಂಸ್ಥೆ ಈಗಾಗಲೇ ಕಾಯ್ದಿರಿಸಿಟ್ಟ ಸಾರ್ವಜನೋಪಕಾರ ನಿಧಿಯಿಂದ ಭರಿಸಲಾಯಿತು. ಹೀಗೆ ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ನೇತೃತ್ವ ವಹಿಸಿ ಊರಿನ ಎಲ್ಲಾ ಸಂಘ ಸಂಸ್ಥೆಗಳು,ಪೋಷಕರು, ದಾನಿಗಳು ನೀಡಿದ ಆರ್ಥಿಕ ಸಹಕಾರವು ಮನೆಯ ಶಿಲೆಯಾಗಿ, ಮರವಾಗಿ, ಬಣ್ಣವಾಗಿ ಮೇಲಿನ ಸೂರಾಗಿ ಒಂದು ಅರ್ಥಪೂರ್ಣ ನೂತನ ಗೃಹ ಆಗುವುದಕ್ಕೆ ಸಾಕ್ಷಿಯಾಗಿದೆ ಎಂದು ಹಾರ್ಧಿಕವಾಗಿ ಹೇಳಬಯಸುತ್ತೇವೆ.
ಹತ್ತಾರು ವರ್ಷಗಳಿಂದ ಬದುಕಿಗೊಂದು ಸೂರು ಕಟ್ಟಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ್ದ ಕೋಡಿ ಕನ್ಯಾಣದ ಭವಾನಿ ಜಿ ನಾಯಕ್ ಕುಟುಂಬಕ್ಕೆ ಗೃಹ ನಿರ್ಮಿಸೋದು ಕನಸಾಗಿಯೇ ಉಳಿದಿತ್ತು ಸೋರುತ್ತಿರುವ ಮೆಲ್ಚಾವಾಡಿ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತುಂಬಾ ಹಳೆಯದಾದ ಮನೆಯಲ್ಲಿ ವಾಸವಿದ್ದ ಭವಾನಿ ಕುಟುಂಬಕ್ಕೆ ಆಸರೆಯಾಗಿ ಬಂದಿದ್ದು ಶ್ರೀ ರಾಮಾಂಜನೇಯ ಸೌಹರ್ದ ಕೋಡಿ ಕನ್ಯಾಣ. ಪ್ರಯಾಶಃ ಭವಾನಿ ಜೆ ಕುಟುಂಬ ಕನಸಿಲ್ಲಿಯೂ ಎಣಿಸದ ಮನೆ ಅದ್ಭುತವಾಗಿ ನಿರ್ಮಾಣವಾಗಿ ದಿನಾಂಕ ೧೪.೦೯.೨೦೨೪ರ ಶನಿವಾರ ಅಪರಾಹ್ನ ೪.೩೦ ಕ್ಕೆ ಸರಿಯಾಗಿ ವಾರ್ಷಿಕ ಮಹಾಸಭೆಯ ನಂತರ ಗೃಹ ಹಸ್ತಾಂತರ ಪ್ರಕ್ರಿಯೆಯು ಜರುಗಿತು.
ಗೃಹ ಹಸ್ತಾಂತರಿಸಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಮಂಜುನಾಥ್ ಎಸ್ ಕೆ ಮಾತನಾಡಿ ಉಡುಪಿ ಜಿಲ್ಲೆಗೆ ರಾಮಾಂಜನೇಯ ಸೌಹರ್ದ ಸಹಕಾರಿ ಸಂಘವು ಸಿಂಧೂರವಿದ್ದಂತೆ ಸಹಕಾರಿ ಕ್ಷೇತ್ರದಲ್ಲಿ ಈ ಸೌಹಾರ್ದಸಹಕಾರಿ ಸಂಘ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಶ್ರೀಮತಿ ಭವಾನಿ ಜಿ.ನಾಯಕ್ ಬಡ ಕುಟುಂಬಕ್ಕೆ ಹೊಸಸೂರು ಕಟ್ಟಿಸಿ ಗ್ರಾಮೀಣ ಭಾಗದಲ್ಲಿ ಸಹಕಾರಿ ರಂಗ ಸ್ಥಾಪಿಸಿ ಬಡವರ ಕಣ್ಣಿರೊರೆಸುವ ಕಾಯಕ ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ. ಸಹಕಾರಿ ರಂಗ ವ್ಯವಹಾರಕ್ಕೆ ಸೀಮಿತಗೊಳ್ಳದೆ ಅಶಕ್ತರಿಗೆ ಮಿಡಿಯುತ್ತಿದೆ ಎಂದರೆ ಈ ಕ್ಷೇತ್ರ ಬದಲಾವಣೆ ಕಾಣುತ್ತಿದೆ ,ಸಹಕಾರಿ ರಂಗ ಸಮತಾವಾದ ಚಿಂತನೆಯೊಂದಿಗೆ ಗ್ರಾಮೀಣ ಜನಸಾಮಾನ್ಯರ ಭವಣೆಯನ್ನು ನೀಗುತ್ತಿದೆ ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಊರಿನ ಸಂಘ ಸಂಸ್ಥೆಗಳ ಹಾಗೂ ಪೋಷಕ ದಾನಿಗಳ ಸಹಕಾರವನ್ನು ಪಡೆದು ಒಂದು ಸೌಹಾರ್ದ ಸಂಸ್ಥೆ ತಮ್ಮದೇ ಬಡ ಗ್ರಾಹಕರಿಗೆ ಒಂದು ಸೂರು ನಿರ್ಮಿಸಿ ಕೊಟ್ಟಿರೋದು ಸಹಕಾರ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುಹುದಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಲಾಭ ಗಳಿಸುಹುದೆ ನಮ್ಮ ಪ್ರಮುಖ ಉದ್ದೇಶ ಎಂಬ ನೆಲೆಯಲ್ಲಿ ಇರುವ ಅಸಂಖ್ಯಾತ ಸಹಕಾರಿ ಸಂಸ್ಥೆಗಳಲ್ಲಿ ಈ ಸೌಹಾರ್ದ ಸಹಕಾರಿ ಸಂಘ ಹೊಸ ಮೈಲಿಗಲ್ಲನ್ನು ಸ್ಥಾಪಿಸಿ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿ ಮೆರೆಯುತ್ತಿದೆ. ಈ ಮಾನವೀಯ ಕೈಂಕರ್ಯಗಳಿಗೆ “ತಥಾಸ್ತು” ಎಂಬ ಯೋಜನೆಯನ್ನು ಸ್ರಷ್ಟಿಸಿ ಆ ಯೋಜನೆಯ ಅನಾವರಣದ ಸುಸಂಧರ್ಭದಲ್ಲಿ ರ್ವ ಬಡ ಕುಟುಂಬಕ್ಕೆ ಗೃಹ ನಿರ್ಮಿಸಿಕೊಡುಹುದರೊಂದಿಗೆ ನೆರವಾಗಿರೋದು ಸಹಕಾರಿ ರಂಗದ ಕ್ರಿಯಾಶೀಲಾ ನಡಿಗೆಗೆ ಎಲ್ಲೆಲ್ಲೂ ಪ್ರಶಂಷೆಯ ಮಾತುಗಳು ಕೇಳಿ ಬರುತ್ತಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಶಂಭು ಪೂಜಾರಿಯವರು ನಮ್ಮ ಸಂಸ್ಥೆ ಸಮಾಜಮುಖಿ ಕಾರ್ಯಗಳಿಗೆ ಸದಾ ಕಟ್ಟಿಬದ್ಧರಾಗಿದ್ದೇವೆ ಲಾಭಗಳಿಸುಹುದರೊಂದಿಗೆ ಇಂತಹ ಮಾನವೀಯ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತೇವೆಂದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿಯವರು ಉಡುಪಿ ಜಿಲ್ಲೆಯಲ್ಲೇ ರಾಮಾಂಜನೇಯ ಸೌಹರ್ದ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದಕ್ಕೆ ಹೆಮ್ಮೆಯಾಗುತ್ತದೆ ಎಂದು ಶುಭಾಶಯ ನುಡಿಗಳಾಡಿದರು. ಈ ವೇಳೆ ರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್,ಧಾರ್ಮಿಕ ಮುಖಂಡ ಮಾಧವ ಉಪಾಧ್ಯಾ, ಕೋಡಿ ಗ್ರಾ.ಪಂ ಅಧ್ಯಕ್ಷೆ ಗೀತಾ ಖಾರ್ವಿ ,ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಸದಸ್ಯರು ಕೃಷ್ಣ ಪೂಜಾರಿ.ಪಿ, ಕಾಮಾಕ್ಷಿಸೌಹಾರ್ದ ಸಹಕಾರಿ ಸಂಘ ಬೈಂದೂರು ಸಿ ಇ ಒ ಶ್ರೀನಿವಾಸ, ಭಾರತ್ ವಿಕಾಸ್ ಸೌಹಾರ್ದಸಹಕಾರಿ ಸಿ ಇ ಒ ರಾಜು, ಕಾಮಧೇನು ಸಹಕಾರಿ ಸಂಘ ಹಂದಟ್ಟು ಸಿಇಒ ಸತೀಶ್ ನಾಯ್ಕ್, ಅಗ್ರಜ ಸೌಹಾರ್ದ ಸಹಕಾರಿ ಸಂಘ ಉಡುಪಿ ಸಿ ಇ ಒ ಗಣೇಶ್ ಕೋಟ್ಯಾನ್,ಪಂಚಗಂಗಾವಳಿ ಸೌಹಾರ್ದಸಹಕಾರಿ ಸಂಘ ಗಂಗೊಳ್ಳಿ ಸಿ ಇ ಒ ಸುಬ್ರಹ್ಮಣ್ಯ, ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಉಪ್ಪುಂದ ಇದರ ಸಿಇಒ ಸುಧಾಕರ್, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ಪಾಂಡೇಶ್ವರ ಸಿಇಒ ಸುದರ್ಶನ , ಸಾರಸ್ಚತ ಸೌಹಾರ್ದಸಹಕಾರಿ ಸಂಘ ಮಣಿಪಾಲ ಸಿಇಒ ಭುವನೇಶ್ ಪ್ರಭು , ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಸಿಇಒ ಲೋಹಿತ್ ಸಾಲಿಯಾನ್,ಆತ್ಮಿಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಘುರಾಮ ಮರಕಾಲ, ಕೋಡಿ ಮೀನುಗಾರ ಸಹಕಾರಿ ಸಂಘದ ನಿರ್ದೇಶಕರುಗಳು, ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರು ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂಧರ್ಭ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್ ಮತ್ತು ನಿರ್ದೇಶಕರು, ಮತ್ತು ಎಲ್ಲಾ ಸಿಬ್ಬಂದಿ ರ್ಗದವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಗೃಹ ನಿರ್ಮಾಣಕ್ಕೆಸಹಕರಿಸಿದ ಉದ್ಯಮಿ ಅಂತೋನಿ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ರಾಘವೇಂದ್ರ ಕರ್ಕೇರ ನಿರೂಪಿಸಿ ವಂದಿಸಿದರು.














